“ಸರ್ಕಾರವು ಬೀದರದಲ್ಲಿ ಅನುಭಾವ ಸಾಹಿತ್ಯ ಪ್ರತಿಷ್ಠಾನ ಸ್ಥಾಪಿಸಲಿ”-ಡಾ. ಪ್ರಕಾಶ ಖಾಡೆ .
ಬೀದರ ಜಿಲ್ಲೆಯು ತತ್ವಪದ,ಸೂಫಿ,ವಚನ ಮತ್ತು ದಾಸ ಸಾಹಿತ್ಯ ಸೇರಿದಂತೆ ಅನುಭಾವ ಸಾಹಿತ್ಯದ ಸಮೃದ್ದ ನೆಲವಾಗಿದ್ದು ಹಾಗಾಗಿ ಬೀದರದಲ್ಲಿ ಕರ್ನಾಟಕ ಸರ್ಕಾರವು ಅನುಭಾವ ಸಾಹಿತ್ಯ ಪ್ರತಿಷ್ಠಾನ ಸ್ಥಾಪಿಸಿ ಅನುದಾನ ಬಿಡುಗಡೆ ಮಾಡುವ ಮೂಲಕ ಅನುಭಾವ ಸಾಹಿತ್ಯ ಪ್ರಚಾರ ಮತ್ತು ಪ್ರಸಾರ ಕಾರ್ಯ ಮಾಡಲಿ ಎಂದು ಬಾಗಲಕೋಟದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಪ್ರಕಾಶ ಖಾಡೆ ಸರ್ಕಾರಕ್ಕೆ ಒತ್ತಾಸೆ ತಿಳಿಸಿದರು.
ಅವರು ದಿನಾಂಕ- 25/03/2016 ರಂದು ಮುಂಜಾನೆ 10.30 ಗಂಟೆಗೆ ಬೀದರಿನ ಹೋಟಲ್ ಕೃಷ್ಣಾ ರಿಜೇನ್ಸಿಯ ಸಭಾಂಗಣದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ,ಬೀದರ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಎರಡು ದಿನಗಳ ತತ್ವಪದ ಮತ್ತು ಸೂಫಿ ಸಾಹಿತ್ಯ ಪರಂಪರೆ ಕುರಿತ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ತತ್ವಪದಕಾರರ ಹಾಗೂ ಸೂಫಿ ಸಂತರ ಕೊಡುಗೆ ಅಪಾರವಾಗಿದೆ. ಭಾಷಾ ಸೌಹಾರ್ದತೆ,ಅನ್ಯಮತ ಸಂಹಿಷ್ಣುತೆ,ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಈ ಸಾಹಿತ್ಯ ಪ್ರಮುಖ ಪಾತ್ರವಹಿಸಿದೆ.ಈ ನಿಟ್ಟನಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡಿ ಈ ಸಾಹಿತ್ಯವನ್ನು ಬೆಳಕಿಗೆ ತರುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ ಚನಶೆಟ್ಟಿ ಆಗಮಿಸಿ ಮಾತನಾಡುತ್ತಾ ಗಡಿ ಭಾಗವಾದ ಬೀದರದಲ್ಲಿ ಕನ್ನಡ ಪರ ಹಾಗೂ ಸಾಹಿತ್ಯಿಕವಾದ ಚಟುವಟಿಕೆಗಳು ನಿರಂತರವಾಗಿ ನಡೆಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳು ಸಕ್ರೀಯವಾಗಿ ಕನ್ನಡ ಬೆಳವಣಿಗೆಗೆ ಶ್ರಮಿಸಬೇಕು ಹಾಗೂ ಇಂತಹ ಕಾರ್ಯಗಳಿಗೆ ಪರಿಷತ್ತಿನ ಸಹಕಾರ ಇರುತ್ತದೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾದ ಶ್ರೀ ಶಿವಕುಮಾರ ನಾಗವಾರ ಹಾಗೂ ಸಿದ್ದಾರ್ಥ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಬಿ.ಕೆ.ಮಠಪತಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಜನ ಸಾಮಾನ್ಯರ ಅನುಭಾವದ ನೆಲೆಯಿಂದ ಬಂದ ತತ್ವಪದ ಹಾಗೂ ಸೂಫಿ ಸಾಹಿತ್ಯವು ಜನರ ಬದುಕಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ, ಇವುಗಳ ಕುರಿತು ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಜಗನ್ನಾಥ ಹೆಬ್ಬಾಳೆ ವಹಿಸಿಕೊಂಡು ಮಾತನಾಡುತ್ತಾ ದಾಸರು, ಶರಣರು.ತತ್ವಪದಕಾರರು,ಸೂಫಿ-ಸಂತರು ಜನಹಿತ ಸಂದೇಶ ನೀಡಿ ಜನಪರ ಚಿಂತಕರಾದವರು. ಬದುಕಬೇಕಾದ ಜೀವನಕ್ಕೆ ರೀತಿ-ನೀತಿಗಳು,ಮಾನವೀಯ ಮೌಲ್ಯಗಳು ಭೋದಿಸಿದರು. ಈ ಸಾಹಿತ್ಯವು ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುವ ಸಾಹಿತ್ಯವಾಗಿವೆ. ಉತ್ತಮ ಸಂಸ್ಕಾರ ನೀಡುವ ಈ ಸಾಹಿತ್ಯವನ್ನು ನಿರಂತರವಾಗಿ ಪ್ರಚಾರ ಮತ್ತು ಪ್ರಸಾರ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀ ಸಂಜೀವಕುಮಾರ ಅತಿವಾಳೆ ಪ್ರಾಸ್ತಾವಿಕವಾಗಿ ಮಾತನಾಡಿ ನಿರ್ಲಕ್ಷಕೆ ಒಳಗಾದ ಸಾಹಿತ್ಯವನ್ನು ಮತ್ತು ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸ ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಮುಖಾಂತರ ಮಾಡಲಾಗುವುದು ಎಂದರು.
ಕು.ಮಹೇಶ್ವರಿ ಶಿವಶರಣಪ್ಪ ಹಾಗೂ ಕು. ರಾಧಿಕಾ ರವರು ತತ್ವಪದ ಗಾಯನ ನಡೆಸಿಕೊಟ್ಟರು. ಶ್ರೀ ರವೀಂದ್ರ ಲಂಜವಾಡಕರ್ ಸ್ವಾಗತಿಸಿದರು, ಶ್ರೀ ಅಬ್ದುಲ್ ರಹೀಮ ನಿರೂಪಿಸಿದರು. ಶ್ರೀ ಶಾಮರಾವ ನೆಲವಾಡೆ ವಂದಿಸಿದರು. ವೇದಿಕೆಯ ಪದಾಧಿಕಾರಿಗಳು, ಸಾಹಿತಿಗಳು ಮತ್ತು ಕನ್ನಡ ಆಸಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.
ವಂದನೆಗಳೊಂದಿಗೆ,