Wednesday, 27 March 2013


ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ

ನವೋದಯ ಸಾಹಿತ್ಯ ವಸಾಹತುಶಾಹಿಯ ಒತ್ತಡ ಅಥವಾ ಪ್ರಭಾವದಿಂದ ಮಾತ್ರ ಹುಟ್ಟಿದ್ದಲ್ಲ. ಜಾನಪದದ ಪ್ರಭಾವ ಅದರ ಮೇಲೆ ಅತ್ಯಧಿಕವಾಗಿದೆ ಎಂಬುದನ್ನು ಖಾಡೆ ಅವರು ಇಲ್ಲಿ ಸಂಶೋಧಿಸಿ ಸಿದ್ಧಪಡಿಸಿದ್ದಾರೆ.
ಧಾರವಾಡದ ಗೆಳೆಯರ ಗುಂಪುಹಲಸಂಗಿ ಗೆಳೆಯರುಮಂಗಳೂರಿನ ಮಿತ್ರ ಮಂಡಳಿಯ ಸಾಧನೆಗಳನ್ನು ಪರಿಚಯಿಸುವ ಮೂಲಕ ಮೈಸೂರು ಕರ್ನಾಟಕ ಸಾಹಿತ್ಯ ಪರಂಪರೆಯ ಸುತ್ತ ನಡೆದ ಚರ್ಚೆಗಳಷ್ಟೇ ಸತ್ಯ ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಜನಪದ ಸಾಹಿತ್ಯದ ಪ್ರೇರಣೆಪ್ರಭಾವಗಳೇ ಹೆಚ್ಚಾಗಿವೆ ಎಂಬ ಅಂಶ ನವೋದಯ ಸಾಹಿತ್ಯದ ಮೇಲೆ ನಮ್ಮ ಪ್ರೀತಿ ಹೆಚ್ಚುವುದಕ್ಕೆ ಪುಸ್ತಕ ಕಾರಣವಾಗುತ್ತದೆ. ಪಿ.ಎಚ್.ಡಿ. ಕೃತಿಗಳಿಗಿರುವ ಮಿತಿಗಳನ್ನು ಮೀರಿಸಿಕೊಂಡು ಪುಸ್ತಕ ಓದಿಸಿಕೊಳ್ಳುತ್ತದೆ.
ಶೀರ್ಷಿಕೆ : ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ಲೇಖಕರು : ಪ್ರಕಾಶ ಗ. ಖಾಡೆ ಪ್ರಕಾಶಕರು :ಅನಿಕೇತ ಪ್ರಕಾಶನ ಪುಟಗಳು :295 ಬೆಲೆ:ರೂ.250/-
ಕೃಪೆ : ಸುಧಾ

No comments:

Post a Comment